Posts

Showing posts from July, 2022

ಜೀವಕಾರುಣ್ಯವೇ ಬಕ್ರೀದ್ ಉತ್ಸವ!

Image
  ಜೀವಕಾರುಣ್ಯವೇ ಬಕ್ರೀದ್ ಉತ್ಸವ  ಕೊಟ್ಟವನು ಮರಳಿ ಕೇಳುತ್ತಾನೆ.. ಇಡೀ ಮನುಕುಲವನ್ನು ಒಂದೇ ಗಂಡು-ಹೆಣ್ಣು ಜೋಡಿಯಿಂದ ಸೃಷ್ಟಿಸಲಾಗಿದೆ ಎಂದು ಹೇಳುವ ಮೂಲಕ ಜಗತ್ತಿನಲ್ಲಿ ಮಾನವ ಸಮಾನತೆ ಮತ್ತು ಸಹೋದರತ್ವವನ್ನು ಸ್ಥಾಪಿಸುವ ಧರ್ಮ ಇಸ್ಲಾಂ ಆಗಿದೆ. ನಮ್ಮ ಮನುಕುಲಕ್ಕೆ ಮಾರ್ಗದರ್ಶನ ನೀಡಲು ಕಳುಹಿಸಲಾದ ಎಲ್ಲಾ ಸಂದೇಶವಾಹಕರನ್ನು ಒಪ್ಪಿಕೊಂಡು ಮತ್ತು ಅವರಿಂದ ಉತ್ತಮ ಜೀವನ ಮಾಗ೯ದಶ೯ನವನ್ನು ಪಡೆದರೆ ಅಳುಕಿಲ್ಲದೆ ಅವರನ್ನು ಅನುಸರಿಸಲು ಇಸ್ಲಾಂ ನಮ್ಮನ್ನು ಒತ್ತಾಯಿಸುತ್ತದೆ. ಆ ರೀತಿಯಲ್ಲಿ ಸುಮಾರು 5000 ವರ್ಷಗಳ ಹಿಂದೆ ಬದುಕಿದ್ದ ದೂತರಲ್ಲಿ ಒಬ್ಬರಾದ ಇಬ್ರಾಹಿಂ (ಅಲೈಹಿಸ್ಸಲಾಂ - ಅವರ ಮೇಲೆ ದೇವರ ಶಾಂತಿ ಇರಲಿ) ಬಕ್ರೀದ್ ಎಂಬ ತ್ಯಾಗದ ದಿನದಂದು ತ್ಯಾಗವೇನೆಂದು ಕಲಿತರು!  ದೇವನು ಅವರಿಗೆ ಕೇಳಿದ್ದು ಅದ್ಭುತವಾಗಿತ್ತು! ಹೌದು, ಪರಿಕ್ಷಾಥ೯ಕವಾಗಿ ಚಿಕ್ಕ ವಯಸ್ಸಿನ ಮಗನನ್ನು ದೇವರು ತನಗಾಗಿ ತ್ಯಾಗಮಾಡಲು ಕೇಳಿದನು! ಅದರಲ್ಲೂ ಜೀವಂತ ಮಗನನ್ನು ವಧಿಸುವಂತೆ ಅವನ ಆದೇಶವಾಗಿತ್ತು! ಇಬ್ರಾಹಿಂ (ಅ.ಸ.) ಯಾವುದೇ ಹಿಂಜರಿಕೆಯಿಲ್ಲದೆ ಅದನ್ನು ಪೂರೈಸಲು ಧೈರ್ಯ ಮಾಡಿದರು. ತಕ್ಷಣವೇ ಭಗವಂತನು ತನ್ನ ಪರೀಕ್ಷೆಯಲ್ಲಿ ಉತ್ತೀರ್ಣನಾಗಿದ್ದಾನೆಂದು ಘೋಷಿಸಿದನು ಮತ್ತು ಅದರ ಪ್ರತಿಯಾಗಿ ಎರಡು ಕುರಿಗಳನ್ನು ವಧಿಸಲು ಆದೇಶಿಸಿದನು. ಈ ವಿವರಗಳನ್ನು ಪವಿತ್ರ ಕುರಾನ್‌ನಲ್ಲಿ ಹೀಗೆ ಉಲ್ಲೇಖಿಸಲಾಗಿದೆ:   ನನ್ನ ಪ್ರಭು! ನನಗೆ ಪುಣ್ಯವಂತ ...